About Us

About Sidila Dhwani

“ಸಿಡಿಲ ಧ್ವನಿ”
ನಮ್ಮ ಹಾಗೂ ನಮ್ಮ ತಂಡದ ಪ್ರಯತ್ನಕ್ಕೆ ನನ್ನ ಧನ್ಯವಾದಗಳು. ನಮ್ಮ ನಿಷ್ಠುರ ಬರವಣಿಗೆಯ ಮೂಲಕ ನೈಜ ಘಟನೆಗಳನ್ನು ಹೊತ್ತು ತರುವ “ಸಿಡಿಲ ಧ್ವನಿ” ನಿಮ್ಮ ಆರೈಕೆಯಲ್ಲಿರುತ್ತದೆ

ನಿಮ್ಮ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು. ನಿಮ್ಮ ನಂಬಿಕೆಯೇ ನಮ್ಮ ಶಕ್ತಿ. ಸತ್ಯವನ್ನು ಸದಾ ನಿಮ್ಮ ಮುಂದಿಡುವ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಹೀಗೇ ಇರಲಿ.

ಸತೀಶ್ ಕುಮಾರ್.ಎಸ್.ಎನ್ -ಸಂಪಾದಕರು

sateeshsn

Mr. SATEESH KUMAR S.N. -Editor

“ಸಿಡಿಲ ಧ್ವನಿ”

ಅಂದ್ರೆ ಇದು ನಿಮ್ಮ “ಧ್ವನಿ” ಅಂದರೇ “ಶೋಷಿತರ ಧ್ವನಿ”. ಸಮ ಸಮಾಜ ನಿರ್ಮಾಣಕ್ಕಾಗಿ, ಭ್ರಷ್ಟರ ವಿರುದ್ಧ ಸೆಣೆಸಲೆಂದು, ವಾಸ್ತವತೆಯ ಮರೆಯಲೆಂದು ಪುಟಿದು ನಿಲ್ಲುವ ಅಕ್ಷರಗಳ ದಾಖಲೆಯೋ ಈ ನಿಮ್ಮ ಪತ್ರಿಕೆ “ಸಿಡಿಲ ಧ್ವನಿ” ಪಾಕ್ಷಿಕ. ಇದರ ಚೊಚ್ಚಲ ಪ್ರಯತ್ನದ ಸಂಚಿಕೆ ಇಂದು ನಿಮ್ಮ ಕೈಯಲ್ಲಿದೆ. ನಾನು ಎಸ್.ಎನ್ ಸತೀಶ್ ಕುಮಾರ್ ನಿಮ್ಮನೆ ಹುಡುಗ ಹುಟ್ಟಿನಿಂದಲೇ ನೋವು, ಬಡತನ, ಶೋಷಣೆ, ಅಸಮಾನತೆ, ಅಸ್ಪೃಶ್ಯತೆ, ಆಚರಣೆಗಳನ್ನು ಕಣ್ಣಿಗೆ ರಾಚುವಂತೆ ನೋಡುತ್ತಾ ಬೆಳೆದವನು. ಕಲಿತದ್ದು ಪದವಿಯನ್ನು ಕಲಾ ವಿಭಾಗದಲ್ಲಿ. ಅದು ದಾವಣಗೆರೆಯ ದಾವಂತದ ಬದುಕಿನಲ್ಲಿ. ವಿದ್ಯಾರ್ಥಿ ದೆಸೆಯಿಂದ ಸಮಾನತೆ ವಿರುದ್ಧ ಸಿಡಿದೆಳುವ ಮನೋಭಾವ ಅದೇಗೋ ನನ್ನೊಳಗೆ ರೂಡಿಸಿಕೊಂಡವನು. ಸಮಷ್ಠಿ ಚಿಂತನೆಗಳಿಂದ ಸಮ ಸಮಾಜ ನಿರ್ಮಾಣದ ಕನಸು ಕಂಡ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್‌ರ ಆತ್ಮಕಥೆಗಳನ್ನು ಓದುತ್ತಾ….ಪ್ರೇರಣೆಗೊಂಡವನು. ನಾನು ಆದೆಷ್ಟೋ..ಮೇಲ್ವರ್ಗದ ಉತ್ತಮ ಒಡನಾಡಿಗಳ ಜೊತೆ ಹೆಜ್ಜೆ ಹಾಕಿದ ಅನುಭವಿದೆ. ಪ್ರಸ್ತುತವಾಗಿ ಸುಮಾರು ವರ್ಷಗಳಿಂದ ನನ್ನ ಬದುಕಿಗೆ ಅನ್ನ ನೀಡಿದ “ಸಂಜೆವಾಣಿ ದಿನ ಪತ್ರಿಕೆ” ಯಲ್ಲಿ ಹರಪನಹಳ್ಳಿ ತಾಲೂಕಿನ ವರದಿಗಾರನಾಗಿ, ಪತ್ರಿಕೋದ್ಯಮದ ವೃತ್ತಿ ಆರಂಭಿಸಿದೆ. ಈ ಹಿಂದೆ “ಹರಿಹರ ನಗರವಾಣಿ”, “ವಿಸ್ಮಯವಾಣಿ”, ಪತ್ರಿಕೆಯಲ್ಲಿ ಒಂದಿಷ್ಟು ದಿನ ಆದಷ್ಟು ಕೆಲಸ ಮಾಡಿ ಹಸಿವು ನೀಗಿಸಿಕೊಂಡಿದ್ದೇನೆ.

ನನ್ನ ಈ ಪತ್ರಿಕೋದ್ಯಮದ ತುಮುಲಗಳಿಗೆ ಸದಾ ಸಹಿಷ್ಣ ಸ್ವಾಭಾವದಿಂದ ಲಾಭವಿರಲಿ ಬಿಡಲಿ, ಸುಖ-ದುಖಃದಲ್ಲಿ ನನ್ನನ್ನು ಪ್ರಮುಖವಾಗಿ ಅರ್ಥೈಸಿಕೊಂಡು “ಪ್ರೀತಿಯಲ್ಲಿ ಬದುಕಿನ ಭ್ರೂಣವಿದೆ” ಎಂದು ಜೊತೆಯಾಗಿರುವ ನನ್ನ ಪ್ರಿಯೇ “ಶ್ರೀಮತಿ ಶಾಲಿನಿ ಪಾಟೀಲ್” ಎಂದು ಹೇಳಲೇ ಬೇಕು. ಈಗ ನನ್ನೊಂದಿಗೆ ಪುಟ್ಟ ಪರಿವಾರವೂ ಇದೆ. ನನ್ನ ಮಗಳು ಕುಮಾರಿ “ವೈಷ್ಣವಿ.ಎಸ್.ಪಾಟೀಲ್” ಮುದ್ದು ಮಗ “ಸಿದ್ದಾರ್ಥ್.ಎಸ್.ಪಾಟೀಲ್” ಸದಾ ನನ್ನುಸಿರು. ಇವರೆಲ್ಲರಿಗೆ ಆಧಾರ ಸ್ಥಂಭವೇ ನನ್ನವ್ವ ಶ್ರೀಮತಿ ಗಂಗಮ್ಮ ಬಸವರಾಜಪ್ಪ ಮತ್ತು ನನ್ನ ಜನ್ಮದಾತ ಶ್ರೀ ಬಸವರಾಜಪ್ಪ ಎಸ್ ಇವರ ಅದಮ್ಯ ಪ್ರೀತಿ ಮತ್ತು ಸಹಕಾರವೇ ಕಾರಣ. ಇದರಿಂದ ಈ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಾದೀತು. ನನ್ನ ಕುಟುಂಬದ ದೊಡ್ಡಪ್ಪ ನಿವೃತ್ತ ಪೊಸ್ಟ ಮಾಸ್ಟರ್ ರಾಮಚಂದ್ರಪ್ಪ ದೊಡ್ಡಮ್ಮ ಕಾಳಮ್ಮ ಮತ್ತು ನಮ್ಮ ಇಡೀ…ಕೂಡು ಕುಟುಂಬದ ಅಣ್ಣಂದಿರು, ಅಕ್ಕ ತಂಗಿಯರು ಸದಾ ನನಗೆ ಬದುಕಿನ ಪ್ರೇರಣೆಗಳು. ನನ್ನ ಒಡಹುಟ್ಟಿದ ಅಕ್ಕ ಶ್ರೀಮತಿ ಲಲಿತಾ ಹೆಚ್.ರವಿಕುಮಾರ್ ನನ್ನ ತಂಗಿ ಶ್ರೀಮತಿ ಮಂಗಳ ಎಂ.ಆನಂದ್ ಇವರ ಮನೆಯವರು ಹಾಗೂ ಇವರ ಮುದ್ದು ಮಕ್ಕಳು ಕೂಡ ನನ್ನ ಕರುಳ ಬಳ್ಳಿಗಳೇ. ಇಲ್ಲಿ ನನ್ನ ದಿಟ್ಟ ಹೆಜ್ಜೆಗಳಿಗೆ ಸದಾ ಬೆನ್ನು ತಟ್ಟಿ ನಾನು ಇದೀನಿ ಮುನ್ನುಗ್ಗು ನಾನು ಜೊತೆಗಿರುವೆ ಎಂದು ನನಗೆ ಧೈರ್ಯ, ಸ್ಥೈರ್ಯ ತುಂಬಿದ ನನ್ನ ಗುರುಗಳಾದ ಪ್ರಗತಿಪರ ಚಿಂತಕ ಅಲಗಿಲವಾಡದ ಎ.ಎಂ. ವಿಶ್ವನಾಥ್ ನಮ್ಮ ಭವಿಷ್ಯದ ಆಶಾಕಿರಣಗಳೇ ಎನ್ನಬಹುದು. ಇದರೊಟ್ಟಿಗೆ ಮೊದ ಮೊದಲು ಪತ್ರಿಕೋದ್ಯಮದಲ್ಲಿ ಅಂಬೆಗಾಲಿಟ್ಟಾಗಲೇ ನನ್ನ ಕೈ ಹಿಡಿದು ನಡೆಸಿ, ಮಾರ್ಗಧರ್ಶನ ವಿತ್ತು, ಉತ್ತಮದಾರಿಗೆ ತಂದವಲ್ಲಿ ಹರಪನಹಳ್ಳಿಯ ಪತ್ರಿಕೋದ್ಯಮದ ಪ್ರಚಲಿತ ಬರಹಗಾರರದ ಅಣ್ಣಾ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರರಾದ ಸುರೇಂದ್ರಬಾಬು, ಹಾಗೂ ಹೊಸದಿಗಂತ ಪತ್ರಿಕೆ ವರದಿಗಾರರಾದ ಎನ್.ರವಿ, ಪ್ರಜಾ ಪ್ರಗತಿ ಪತ್ರಿಕೆ ವರದಿಗಾರರಾದ ಮಂಡಕ್ಕಿ ಸುರೇಶಣ್ಣ, ಜನತಾವಾಣಿ ಪತ್ರಿಕೆಯ ವರದಿಗಾರರಾದ ಕೋರಶೆಟ್ಟಿ ಉಚ್ಚಂಗಪ್ಪ, ಪ್ರಜಾವಾಣಿ ಪತ್ರಿಕೆಯ ವರದಿಗಾರರಾದ ಸಹೂದರ ಸೊಗಿ ವಿಶ್ವನಾಥ್, ಕನ್ನಡ ಪ್ರಭ ಪತ್ರಿಕೆಯ ವರದಿಗಾರರಾದ ಬಿ.ರಾಮಪ್ರಸಾದ್ ಗಾಂಧಿ, ನಾಗರಿಕ ಪತ್ರಿಕೆ ವರದಿಗಾರರಾದ ಪಿ.ವೆಂಕಟೇಶ್, ನಗರವಾಣಿ ವರದಿಗಾರರಾದ ಮಾಧವ ರಾವ್, ವಿಶ್ವವಾಣಿ ಪತ್ರಿಕೆ ವರದಿಗಾರರಾದ ಸಿ.ನಾಗರಾಜ್ ನಾಯ್ಕ್, ಟಿ.ಬಿ.ರಾಜಣ್ಣ, ಹುಣಿಸಿಹಳ್ಳಿ ಕೊಟ್ರೆಶ್ ಹಾಗೂ ಗೆಳೆಯರಾದ ಅಡ್ವೋಕೇಟ್ ಚಿಕ್ಕೇರಿ ಹನುಮಂತಪ್ಪ, ನನ್ನ ಸಹೋದರ ಮೋಹನ್, ವಿರೇಶ್, ಗಗನ್ ರಾಜ್,ಹೆಚ್.ಎಂ.ವಿಜಯಕುಮಾರ್, ಅಲಗಿಲವಾಡ ಕೆ.ಎಂ.ಶಂಕರ್, ಕೆ.ಎಂ.ಉಮ್ಮಯ್ಯ, ವಕೀಲರಾದ ತಿಪ್ಪೇಶ್, ತೆಲಗಿ ವಕೀಲರಾದ ಉಮೇಶ್ ಅಣ್ಣ, ಕೆ.ಎಸ್.ಆರ್.ಟಿ.ಸಿ ಬೆಂಗಳೂರು ಎರಡನೇ ವಿಭಾಗದ ಕರಿಬಸವರಾಜ್ ಜಜ್ಜೂರಿ ಅಣ್ಣಾ, ಹೆಚ್.ರವಿಕುಮಾರ್, ಗಣೇಶ್ ಗಡ್ಡಿ, ಈಡಿಗರ್ ಸಂತೋಷ್, ಪಿಡಿಒ ಎಸ್.ಹೆಚ್.ಹೆಮಂತ್ ಕುಮಾರ್, ಪಶು ಇಲಾಖೆ ಶಿವಣ್ಣ(ಬುಳ್ಳುಣ್ಣ), ಮಾವ ದುರುಗೇಶ್ ಉಪನ್ಯಾಸಕರು ಆರ್.ಬಿ.ಧನ್‌ರಾಜ್, ಎಂ.ಮಾರುತಿ, ಎಂ.ಆನಂದ್, ಎಂ.ಲಕ್ಕಪ್ಪ, ಪಿ.ದಿನೇಶ್, ಎ.ಪ್ರಭು, ಬಾಪುಜಿ ನಗರದ ಸಿ.ಪ್ರಕಾಶ್, ರಮೇಶ್, ಕೋಟೆಪ್ಪ, ಯಲ್ಲಪ್ಪ, ಮಲ್ಲಿಕಾರ್ಜುನ, ಪೂಜಾರ್ ಉಲ್ಲಾಸ್. ಮುಗ್ದ ಮನಸಿನ ಅಭಿಷೇಕ್ ಪೂಜಾರ್, ಅರುಣ್ ಹೀಗೆ ಮುಂದುವರೆದು ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ , ಸಾದ ನನ್ನ ಹಿತೈಸಿ ಯುವ ರಾಜಕಾರಣಿ ಮೇಗಳಪೇಟೆಯ ಎಂ.ಎನ್.ಪ್ರಮೋದ್ ಕುಮಾರ್, ಹಿರಿಯ ಪತ್ರಕರ್ತರರಾದ ಕೋಡಿಹಳ್ಳಿ ಭೀಮಣ್ಣ, ಕಬ್ಬಳ್ಳಿ ಪರಸಪ್ಪ, ದಿವಂಗತ ಗೌರಿ ಹಳ್ಳಿ ಮಂಜುನಾಥ, ಕಣಿವೆಹಳ್ಳಿ ಮಂಜುನಾಥ್, ಕಬ್ಬಳ್ಳಿ ಬಸವರಾಜ್,ಮೈಲಪ್ಪ, ಕಾಮ್ರೆಡ್ಗಳಾದ ಹೆಚ್.ಎಂ.ಸಂತೋಷ್, ಗುಡಿಹಳ್ಳಿಹಾಲೇಶ್, ಹೂಸಹಳ್ಳಿ ಮಲ್ಲೇಶ್, ದಿವಂಗತ ಇದ್ಲಿ ರಾಮಪ್ಪ, ರಮೇಶ್ ನಾಯ್ಕ್, ಕಲ್ಯಾಣ ಅಧಿಕಾರಿ ವಿಜಯ ಲಕ್ಷ್ಮಿ ಸಹಾಯಕ ನಿರ್ದೇಶಕರಾದ ಆನಂದ್ ಡೋಳ್ಳಿನಾ, ಶ್ರೀಮತಿ.ರೇಣುಕದೇವಿ, ನಿಲಯ ಪಾಲಕರಾದ ಚಂದ್ರಪ್ಪ ಬಿ.ಹೆಚ್, ಎನ್.ಜಿ.ಬಸವರಾಜ್, ಜುಂಜಪ್ಪ, ದೇವೇಂದ್ರಪ್ಪ, ರಾಘವೇಂದ್ರ, ರವಿಗೌಡ, ಬಿ.ಎಚ್.ಪ್ರಕಾಶ್, ಶ್ರೀಮತಿ ಸುನೀತ, ಯಾಸ್ಮಿನ್, ಯಲ್ಲವ್ವ ಬಿಸಿಎಂ ವಿಸ್ತಣಾಧಿಕಾರಿ ಭೀಮಪ್ಪ ಕೂಳಚಿ, ಡಿ.ಎಸ್.ಎಸ್ ಸುಬಾಷ್, ಯಲ್ಲಪ್ಪ ನನಗೆ ಆದರ್ಶ ಪ್ರಿಯರು. ಇವರಂತೆ ಸದಾ ನನಗೆ ಸಾಥ್ ನೀಡುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರುಗಳು, ಬಿಜೆಪಿ ಪಕ್ಷದ ನಾಯಕರುಗಳು, ಜೆಡಿಎಸ್ ಪಕ್ಷದ ನಾಯಕರು, ಮಾನವ ಬಂಧತ್ವ ವೇದಿಕೆಯ ಎಲ್ಲಾ ಪಧಾಧಿಕಾರಿಗಳು, ಹರಪನಹಳ್ಳಿಯ ಎಲ್ಲಾ ಸಂಘಟನೆಯ ಸದಸ್ಯರು, ತಾಲೂಕು ಹರಪನಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘ ಸಂಘದ ಪ್ರಗತಿಪರ ಚಿಂತಕ ಇರ್ಫಾನ್ ಮುದುಗಲ್ಲ್, ಗೆಳೆಯರಾದ ಈಡಿಗರ ವೆಂಕಟೇಶ್, ಬಿದ್ದಾಡಿ ರಮೇಶ್, ದೊಡ್ಮನಿ ಬಸವರಾಜ್, ಭಂಗಿ ಚಂದ್ರಪ್ಪ, ಶಶಿಕುಮಾರ್, ಬಿ.ನಾಗರಾಜ್, ಶಬ್ಬೀರ್ ಸಾಹೇಬ್, ಅಣಜಿಗೇರೆ ಕೊಟ್ರೆಶ್, ಮೈಲಾರಿ, ಹುಲಿಕಟ್ಟಿ ಮಾಬು ಸಾಹೇಬ್, ಇವರೇಲ್ಲರ ಸಹಕಾರ & ನೆನಪುಗಳನ್ನು ಇಲ್ಲಿ ಸ್ಮರಿಸಲೇಬೇಕು. ನನ್ನ ಈ ಪುಟ್ಟ ಪ್ರಯತ್ನಕ್ಕೆ ಪ್ರಿಂಟ್ ಅಕ್ಷರಗಳನ್ನು ಮುದ್ರಿಸಲು ಅತ್ಯಂತ ಪ್ರೀತಿಯಿಂದ ಒಪ್ಪಿ, ತಮ್ಮದೇ ಮುದ್ರಣಾಲಯದಲ್ಲಿ ಅಕ್ಷರ ಲೋಕದೊಂದಿಗೆ ಬಾಂಧವ್ಯದ ಬೆಸುಗೆ ಗೈದಿರುವ ನನ್ನ ಅಣ್ಣ ಶ್ರೀ ನಂದಿ ಆಫ್ ಪ್ರಿಂಟರ್ಸ್ನ ಗುರು ಅಣ್ಣ ಅವರ ಪ್ರೋತ್ಸಾಹ, ಸಹಕಾರಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ.

ನಮ್ಮ “ಸಿಡಿಲ ಧ್ವನಿ” ಪತ್ರಿಕೆಯ ಮೂಲ ಜೀವಾಳವೇ ಓದುಗ ಮಹಾಪ್ರಭುಗಳು. ಹೀಗಾಗಿ ಸದಾ ನಿಮ್ಮ ಸಹಕಾರ ನಮ್ಮೊಂದಿಗಿರಲಿ. ನಿಮ್ಮ ಕೃಪೆಯೇ ನಮಗೆ ಜೀವರಕ್ಷೆ. ಇನ್ನು ಹರಪನಹಳ್ಳಿಯ ದಲಿತ, ಅಂಬೇಡ್ಕರ್, ಎಡಪಂಥೀಯ, ರೈತ, ಕೂಲಿ ಕಾರ್ಮಿಕ, ಮಹಿಳಾ ಸಂಘಟನೆಗಳು ಮತ್ತು ವಿದ್ಯಾರ್ಥಿ ಯುವ ಮುಖಂಡರ ಸಲಹೆ -ಸಹಕಾರ ಸದಾ ನಮ್ಮೊಂದಿಗಿರಲಿ. ಎಲ್ಲಕ್ಕಿಂತ ಮಿಗಿಲಾಗಿ ನನಗೆ ತಿದ್ದಿ ತೀಡುವ ಅಧಿಕಾರ ಓದುಗಗಾರರ ಹಾಗೂ ವಾಚಕ ಪ್ರಭುಗಳಾದ ತಮ್ಮದು. ಇದರಂತೆ ಸ್ಥಳೀಯ ಮತ್ತು ನಾಡಿನ ಸಮಸ್ತ ಸಮಾಜದ ಎಲ್ಲಾ ಮಠಾಧೀಶ್ವರರ ಆಶೀರ್ವಾದ ನಮಗಿರಲಿ ಎಂದು ಈ ಪುಟ್ಟ ನಿವೇದನೆ. ಪತ್ರಿಕೆ ಆಡಂಭರವಿಲ್ಲದೆ ನಿಮ್ಮ ಕೈಗಿಡುತ್ತಿರುವೆ. ಈ ಪತ್ರಿಕೆ ವಿಳಾಸ ಬಳಸಿ ಸುದ್ದಿ- ಸಲಹೆಗಳನ್ನು ಹಂಚಿಕೊಳ್ಳಬೇಕಾಗಿ ವಿನಂತಿ.

ಸತೀಶ್ ಕುಮಾರ್.ಎಸ್.ಎನ್ -ಸಂಪಾದಕ

vishwanat-1

A.M.Vishwanath- Senior Chief Editor

ಇದೊಂದು ಹವ್ಯಾಸಿ ಚಟುವಟಿಕೆ. ಪತ್ರಿಕಾ ರಂಗಕ್ಕೆ ಕಾಲಿಡುವ ಮುನ್ನ ಓದುವ ಹವ್ಯಾಸ ಬರೆಯುವ ಜಾಡಿಗೆ ಅಣಿಗೊಳಿಸಿತು. ಮೂಲತಃ ಸದಾ ಪುಸ್ತಕ ಓದುವ ಮತ್ತು ಇಚ್ಚಿಸಿದದ್ದನ್ನು ಬರೆದು ದಾಖಲಿಸುವ ಹವ್ಯಾಸ ಹುಟ್ಟಿಕೊಂಡಿತು. ಕಾಲಾನಂತರದಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ಸಾಂದರ್ಭಿಕವಾಗಿ ಜಟಿಲ ಮತ್ತು ವಿಶುದ್ಧ ಸಾಮಾಜೀಕ ಪಿಡುಗುಗಳು ಕಣ್ಮುಂದೆ ಆಗಿಂದಾಗ್ಗೆ ಸರಿದು ಹೋಗುವ ಸೀಳು ದಾರಿಯಲ್ಲಿ ಈ ಸ್ಥಿತ್ಯಂತರ ರಾಜಕಾರಣದ ಏರಿಳಿತಗಳನ್ನು ದಾಖಲಿಸುವ ಏಕ ಮಾತ್ರ ಉದ್ದೇಶದಿಂದ ಬರೆದಿಡುವ ಪ್ರಯತ್ನ ಮಾಡಲಾಯಿತು. ನಂತರದಲ್ಲಿ ರಾಜ್ಯ ಮಟ್ಟದ ಅನೇಕ ಪತ್ರಿಕೆಗಳಿಗೂ ಬರೆದು ಪ್ರೋತ್ಸಾಹ ಧನ, ಮನ್ನಣೆ ಪಡೆದದ್ದು ಇಲ್ಲಿಯೇ ಉಳಿಯುವ ನೆಲೆ ಕಂಡು ಕೊಳ್ಳಲು ಕಾರಣವಾಯಿತು.
ಪ್ರವರ್ಧಮಾನಕ್ಕೆ ಬಂದಾಗಿನಿಂದ ವ್ಯಾಸಂಗದ ಜೊತೆ ಜೊತೆಗೆ ಅನೇಕ ಬದುಕಿನ‌ ಧಾವಂತದ ತುಡಿತಗಳಲ್ಲಿ, ಬದುಕುತ್ತಿದ್ದ ಬಡತನದ ಕರಿ ನೆರಳು, ಎಡ ಸಿದ್ಧಾಂತದತ್ತ ಆಕರ್ಷಣೆ ಮಾಡಿ, ಈ ಜಾಡಿಗೆ ತಂದು ನಿಲ್ಲಿಸಿತು. ನಮ್ಮ ಅರಿವಿಲ್ಲದೇ ಹೋರಾಟದ ಹಾದಿ ಬಹುದೊಡ್ಡ ರಹದಾರಿಯಾಗಿ ಕಾಣಿಸಿತು. ಆಗೆಲ್ಲಾ ಸಿಕ್ಕ ಹಿರಿ-ಕಿರಿಯ ಸಂಗಾತಿಗಳೇ ಒಪ್ಪುಳ್ಳ ಬಂಧುಗಳಾದರು. ಇಲ್ಲಿ ಅದೆಷ್ಟೋ ಜನ ನೆರಳಾಗಿ, ಆಸರೆಯ ಊರುಗೋಲಾದರೇ…. ಹಲವರು ಕುಕ್ಕಿ ತಿನ್ನುವ ಕಾಗೆಗಳಾದರು.
ಇಂತಹ ಸಂದರ್ಭದಲ್ಲಿ ನನಗೆ ಈ ಸಿಡಿಲ ದ್ವನಿ ಎಂಬ ತಲೆಬರಹದ ಪಾಕ್ಷಿಕ ಪತ್ರಿಕೆ ‌ಆರಂಬಿಸುವ ಕನಸು ಹೊತ್ತ ಹಠವಾದಿ ಹುಡುಗ ಛೇಜಿಂಗ್ ಬಾಯ್ ನನ್ನೊಡನೆ ಹಾವಿನಂತೆ ಹರದಾಡುತ್ತಿದ್ದ ಸತೀಶ್ ಕುಮಾರ್. ಎಸ್.ಎನ್.(ಸಿಡಿಲ ದ್ವನಿ- ಪತ್ರಿಕೆಯ ಸಂಪಾದಕರು) ಬಹು ದಿನಗಳಿಂದ ಪತ್ರಿಕೆ ಮಾಡೋಣ ಎಂದು ಹೇಳುತ್ತಲೇ ಇದ್ದ. ಅನೇಕ ಬಾರಿ ಚರ್ಚಿಸಿ, ಸುದೀರ್ಘ ಪ್ರಯತ್ನದಲ್ಲಿ ಯಶಸ್ಸು ಕಂಡು ಅವರೇ ಬಯಸಿದ್ದ ತಲೆ ಬರಹದ ಆಸೆಯ ಟೈಟಲ್ ತಂದೇ… ಬಿಟ್ಟ. ತಡ ಮಾಡದೇ ಹಲವು ಸರ್ಕಸ್ ಗಳ ಮಾಡಿ ಪತ್ರಿಕೆಯನ್ನು ವ್ಯವಸ್ಥಿತವಾಗಿ, ಕಾನೂನು ಬದ್ದವಾಗಿ ನಿಮ್ಮಗಳ ಕೈಗಿಟ್ಟಿದ್ದೇವೆ. ನಾವೂ ಹತ್ತರಂತೆ ಹನ್ನಂದು ಆಗಬಾರದೆಂಬ ನಿಲುವಿಗೆ ಬದ್ಧರಾಗಿರಬೇಕಿದೆ. ಇಲ್ಲಾರೂ ಹರಿಶ್ಚಂದ್ರರಿಲ್ಲ. ಆದರೇ…ಅವನು ಹುಟ್ಟಿದ ಮಣ್ಣಿನಲ್ಲಿ ನಾವೂ ಹಟ್ಟಿದ್ದೇವೆ ಎಂಬ ಹೆಮ್ಮೆಯಿದೆ. “ಕ್ರಾಂತಿ ಚಿರಾಯು”, ನಾವು ಬಿದ್ದ ಮರಗಳಲ್ಲ, ಬಿತ್ತಿದ ಬೀಜಗಳೆಂದು ಸ್ವಾಭಿಮಾನದಿಂದ ಬದುಕಿದ ಭಗತ್ ಸಿಂಗ್ ಸಂತತಿಯ ಕುಲದವರು ಎಂದು ಎದೆ ತಟ್ಟಿ ಹೇಳ ಬಲ್ಲೆವು. ಈ ಕಾರಣಕ್ಕಾಗೇ ನಮ್ಮ ಪತ್ರಿಕೆ ಪ್ರಾಙ್ಞರು ಪ್ರಶಂಸಿಸುವಂತೆ, ಪ್ರಭುದ್ಧರು ಒಪ್ಪುವಂತೆ, ವಿಲಕ್ಷಣ ಮನದವರು ಕಿಚಾಸುವಂತೆ ಪೂರ್ಣ ಪ್ರಮಾಣವಲ್ಲದಿದ್ದರೂ ಕನಿಷ್ಠ ಒಂದಿಷ್ಟು ಸಮಾಜಮುಖಿ ನಿಲುವುಗಳ ವಿಷಯಾಧಾರಿತ ಪತ್ರಿಕೆಯಾಗಿ ಪ್ರಕಟಿಸುತ್ತಿರುವ ತೃಪ್ತಿ ನಮಗಿದೆ.
ನಮ್ಮ ಪತ್ರಿಕೆ ನಿಮ್ಮ ಪ್ರೀತಿ, ಸಲಹೆ, ಸಹಕಾರ, ಬೆಂಬಲಗಳ ಕಾರಣ ಕಡಿಮೆ ಕಾಲ ಮಿತಿಯಲ್ಲೇ ಈ ಹಂತಕ್ಕೆ ಬಂದು ನಿಂತಿದೆ. ಆರ್ಥಿಕ ಏಳು ಬೀಳಿನ ಸವಾಲುಗಳ ಮದ್ಯ ಇನ್ನೂ ಗಟ್ಟಿಯಾಗಿ ಉಳಿದಿದ್ದೇವೆ. ನಮ್ಮ ಜನರಿಗೆ ಪತ್ರಿಕೆ ಖರೀದಿಸಿ, ಓದುವ ಹವ್ಯಾಸ ಮೊದಲು ಬೆಳೆಯ ಬೇಕಿದೆ. ಅಂದಾಗ ಪತ್ರಿಕೆ ಜೀವಂತವಾಗಿ ಸದಾ ನಿಮ್ಮೊಂದಿಗಿರಬಲ್ಲದು. ಈಗಿನ ಅಪ್ ಗ್ರೇಡ್ ಧಾವಂತದಲ್ಲಿ ಸಿಡಿಲ ದ್ವನಿ ಕೂಡಾ ನಿಮ್ಮ ಕೈ ಬೆರಳ ತುದಿಯಲ್ಲಿ ಸಿಗಲಿ ಎಂದು ನಮ್ಮ ಸಂಪಾದಕರು ಇ- ಪತ್ರಿಕೆ ವ್ಯಾಪ್ತಿಗೆ ತಂದಿದ್ದಾರೆ. ಓದುಗ ಪ್ರಭುಗಳು ಸಹಕರಿಸಿದರೆ ಕೈ ಹಿಡಿದು ಬೆಳಸಿದರ ನಾವೂ ನಿಮ್ಮ ಜೊತೆಗೆ ಸಂಭ್ರಮಿಸುವೆವು…

ಎ.ಎಂ.ವಿಶ್ವನಾಥ
ಹಿರಿಯ ಮುಖ್ಯ ಸಂಪಾದಕ
ಸಿಡಿಲ ಧ್ವನಿ ಪತ್ರಿಕೆ

3-new

Mr. Hanumanthappa. C-Legal Advisior

ಸಿಡಿಲ ದ್ವನಿ ಪಾಕ್ಷಿಕ ಪತ್ರಿಕೆ ಇಂದು ವಿಜಯನಗರ ಜಿಲ್ಲೆ, ಹಾಗೂ ದಾವಣಗೆರೆ ಮತ್ತು ಹರಪನಹಳ್ಳಿ ಸುತ್ತಮುತ್ತಲಿನ ತಾಲ್ಲೂಕಿನ ಭಾಗದಲ್ಲಿ ಜನಮಾತಾಗಿದೆ. ಇದು ನಮ್ಮ ಆತ್ಮೀಯ ಒಡನಾಡಿಯಾದ ಎರಡು ದಶಕಗಳಿಂದ ಜೊತೆಗಿರುವ ಅತ್ಯುತ್ತಮ ಗೆಳೆಯ ಎಸ್. ಎನ್. ಸತೀಶ್ ಕುಮಾರ್ ಒಡೆತನದ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದೆ.

ಇವರು ಹೋರಾಟದ ಹಾದಿಯಲ್ಲಿ ಸದಾ ಸಂಘಟನೆ, ಕ್ರಿಯಾಶೀಲ ನಡೆಯ ನಲ್ಮೆಯ ಗೆಳೆಯ ಪುಣಬಗಟ್ಟಿ ಎಂಬ ಒಂದು ಪುಟ್ಟ ಹಳ್ಳಿಯ ಬಡ ರೈತ ಕುಟುಂಬದಿಂದ ಬೆಳೆದು ಬಂದಿರುವ ಎಸ್.ಎನ್ ಸತೀಶ ಕುಮಾರ ಅವರಿಗೆ ಸಮಾಜದ ಕಟ್ಟುಪಾಡಿನ ಒಳ-ಹೊರ ನಾಡಿ ಮಿಡಿತದ ಸೂಕ್ಷ್ಮ ಅರಿವಿದೆ.

ಗೆಳೆಯನ ಈ ಪತ್ರಿಕೆ ಯಾವ ಆಢಂಬರವಿಲ್ಲದೇ ಅತ್ಯಂತ ಸೂಕ್ಷ್ಮ ಮತ್ತು ವಸ್ತುನಿಷ್ಠ ಪ್ರಖರವಾದ ಜನದ್ವನಿಯಾಗಿ. ನಿರ್ಭಿತಿಯಿಂದ ವರದಿಗಳನ್ನು ಬಿತ್ತರಿಸುತ್ತಿರುವುದು ನಿಜಕ್ಕೂ ಗ್ರೇಟ್‌. ಈ ಪತ್ರಿಕೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮತ್ತು ಸಮಾಜದಲ್ಲಿನ ಕಳೆಯನ್ನು ಕೀಳ ಬಲ್ಲ ಪ್ರೌಢಿಮೆಯ ಬಹು ಸ್ಪಷ್ಟ ಸತ್ಯವನ್ನು ಸಾಕ್ಷಾಧಾರಿತವಾಗಿ ವರದಿ ಮಾಡಿ ಉತ್ತಮ ಗುಣಮಟ್ಟದ ವೃತ್ತಿ ಧರ್ಮ ಪಾಲಿಸುತ್ತಿದೆ.

ಗೆಳೆಯ ಬಳಗದ ಈ ಸತ್ಕಾರ್ಯವನ್ನು ಪ್ರಶಂಸೆ ಮಾಡಿ ಬೆಂಬಲಿಸಲೇ ಬೇಕಾಗಿರುವ ಆಧ್ಯ ಕರ್ತವ್ಯ ನಮ್ಮದಾಗಿದೆ. ಈ ದಿಸೆಯಲ್ಲಿ ನಾವು ಪತ್ರಿಕಾ ಬಳಗದಲ್ಲಿ ಕಾನೂನು ಸಲಹೆಗಾರರಾಗಿ ಅತ್ಯಂತ ಪ್ರೀತಿ ಮತ್ತು ಹೆಮ್ಮೆಯಿಂದ ಕಾರ್ಯ ನಿರ್ವಹಿಸಲು ಮುಂದಾಗಿದ್ದೇವೆ.

ನಮ್ಮೀ ಪತ್ರಿಕೆಗೆ ಉತ್ತಮ ಕಾನೂನು ಬದ್ಧ ಸಲಹೆ ಸಹಕಾರ ನೀಡಲು ನಮಗೆ ಅತೀವ ಸಂತಸವಾಗುತ್ತಿದೆ. ಓದುಗರ ಸಹಾಯ, ಸಹಕಾರ ಸದಾ ಪತ್ರಿಕೆ ಮತ್ತು ಇಡೀ ಪತ್ರಿಕಾ ತಂಡದ ಮೇಲೆ ಇರಲಿ ಎಂಬ ಮನವಿ ನಮ್ಮದು.

 

C.ಹನುಮಂತಪ್ಪ (CHP) ವಕೀಲರು & ಕಾನೂನು ಸಲಹೆಗಾರರು
ಸಿಡಿಲ ಧ್ವನಿ ಪತ್ರಿಕೆ

How can we help you?

Contact us at info@sidiladhwani.com